ಕರ್ನಾಟಕ ಪಂಚಾಯತ್ ರಾಜ್ ಆಯುಕ್ತಾಲಯ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ “ರಾಜೀವ್ ಗಾಂಧಿ ಪಂಚಾಯತ್ ರಾಜ್ ಫೆಲೋಶಿಪ್” ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಈ ಅಧಿಸೂಚನೆ 31-08-2024 ರಂದು ಪ್ರಕಟವಾಗಿದೆ. ಕಲ್ಯಾಣ ಕರ್ನಾಟಕ ಪ್ರದೇಶದ ತಾಲ್ಲೂಕುಗಳಿಗೆ 07 ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಈ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
Karnataka Panchayat Raj Recruitment 2024
ಗ್ರಾಮೀಣ ಕರ್ನಾಟಕದ ಅಭಿವೃದ್ಧಿಯಲ್ಲಿ ನೀವು ಪಾತ್ರ ವಹಿಸಲು ಬಯಸುವಿರಾ? ಕರ್ನಾಟಕ ಸರ್ಕಾರದ ರಾಜೀವ್ ಗಾಂಧಿ ಪಂಚಾಯತ್ ರಾಜ್ ಫೆಲೋಶಿಪ್‌ಗೆ ಅರ್ಜಿ ಸಲ್ಲಿಸುವ ಈ ಅದ್ಭುತ ಅವಕಾಶವನ್ನು ಕಳೆದುಕೊಳ್ಳಬೇಡಿ. ಈ ಫೆಲೋಶಿಪ್‌ನಲ್ಲಿ ಆಯ್ಕೆಯಾದ ಅಭ್ಯರ್ಥಿಗಳು ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುವ ಅವಕಾಶ ಪಡೆಯುತ್ತಾರೆ.
ಉದ್ಯೋಗಕ್ಕೆ ಅರ್ಜಿ ಸಲ್ಲಿಸುವ ಮುನ್ನ ಈ ಮಾಹಿತಿಯನ್ನು ಚೆನ್ನಾಗಿ ಓದಿ!
- ವಿದ್ಯಾರ್ಹತೆ, ವಯಸ್ಸು, ವೇತನ: ಯಾವ ಯಾವ ಹುದ್ದೆಗೆ ಯಾವ ವಿದ್ಯಾರ್ಹತೆ ಬೇಕು, ಎಷ್ಟು ವಯಸ್ಸಿನವರು ಅರ್ಜಿ ಹಾಕಬಹುದು, ಎಷ್ಟು ಸಂಬಳ ಸಿಗುತ್ತದೆ ಎಂಬೆಲ್ಲಾ ಮಾಹಿತಿಯನ್ನು ಚೆನ್ನಾಗಿ ಓದಿ.
- ಅಧಿಸೂಚನೆ ಓದಿ: ಕೆಳಗಡೆ ಕೊಟ್ಟಿರುವ ಲಿಂಕ್‌ನಲ್ಲಿ ಅಧಿಸೂಚನೆ ಸಂಪೂರ್ಣವಾಗಿ ಓದಿ. ಇದರಲ್ಲಿ ಎಲ್ಲಾ ಮಾಹಿತಿ ವಿವರವಾಗಿ ಇರುತ್ತದೆ.
- ಇತರ ಗ್ರೂಪ್‌ಗಳಿಗೆ ಜಾಯಿನ್ ಆಗಿ: ನಮ್ಮ ಟೆಲಿಗ್ರಾಮ್ ಮತ್ತು ಫೇಸ್‌ಬುಕ್ ಗ್ರೂಪ್‌ಗಳಿಗೆ ಜಾಯಿನ್ ಆಗಿ. ಪ್ರತಿದಿನ ಹೊಸ ಉದ್ಯೋಗ ಮಾಹಿತಿ ಸಿಗುತ್ತದೆ.
- ಕೊನೆಯ ದಿನಾಂಕ ಗಮನಿಸಿ: ಅರ್ಜಿ ಹಾಕಲು ಕೊನೆಯ ದಿನಾಂಕವನ್ನು ಮಿಸ್ ಮಾಡಿಕೊಳ್ಳಬೇಡಿ.
- ಉಚಿತ ಸೇವೆ: ನಾವು ಒದಗಿಸುವ ಎಲ್ಲಾ ಮಾಹಿತಿ ಉಚಿತವಾಗಿರುತ್ತೆ. ನಮ್ಮ ಹೆಸರಿನಲ್ಲಿ ಯಾರಾದರೂ ಹಣ ಕೇಳಿದರೆ ತಕ್ಷಣ ನಮಗೆ ಮಾಹಿತಿ ನೀಡಿ.
ಉದ್ಯೋಗದ ಮೇಲ್ನೋಟ
ನೇಮಕಾತಿ ಸಂಸ್ಥೆ | ಕರ್ನಾಟಕ ಪಂಚಾಯತ್ ರಾಜ್ ಆಯುಕ್ತಾಲಯ |
---|---|
ಹುದ್ಧೆಯ ಹೆಸರು | ಫೆಲೋಶಿಪ್ |
ಒಟ್ಟು ಹುದ್ದೆ | 07 |
ಉದ್ಯೋಗ ಸ್ಥಳ | ಬೀದರ್, ಕಲಬುರಗಿ, ರಾಯಚೂರು, ಯಾದಗಿರಿ |
ಅಧಿಕೃತ ವೆಬ್‌ಸೈಟ್ | prcrdpr.karnataka.gov.in |
ಅರ್ಜಿ ಸಲ್ಲಿಸುವ ಬಗೆ | ಆನ್‌ಲೈನ್ |
ವಾಟ್ಸಾಪ್ ಗ್ರೂಪ್ ಸೇರುವ ಲಿಂಕ್ ಇಲ್ಲಿ ಕ್ಲಿಕ್ ಮಾಡಿ | ಇಲ್ಲಿ ಕ್ಲಿಕ್ ಮಾಡಿ |
ಹೆಚ್ಚಿನ ಉದ್ಯೋಗಗಳು: 11558 ಹುದ್ದೆಗಳು: ಸ್ಟೇಷನ್ ಮಾಸ್ಟರ್ ಮತ್ತು ಟ್ರೈನ್ಸ್ ಕ್ಲರ್ಕ್ ರೈಲ್ವೆ ನೇಮಕಾತಿ 2024| ರೈಲ್ವೆ ಉದ್ಯೋಗಗಳಿಗಾಗಿ ಭಾರಿ ನೇಮಕಾತಿ
ಶೈಕ್ಷಣಿಕ ಅರ್ಹತೆ
- ಸಾಮಾಜಿಕ ವಿಜ್ಞಾನಗಳಲ್ಲಿ ಸ್ನಾತಕ ಅಥವಾ ಸ್ನಾತಕೋತ್ತರ ಪದವಿಯನ್ನು ಪಡೆದಿರಬೇಕು.
- ಅಭಿವೃದ್ಧಿ ಕ್ಷೇತ್ರದಲ್ಲಿ ಕನಿಷ್ಠ 1-2 ವರ್ಷಗಳ ಅನುಭವ ಹೊಂದಿರಬೇಕು.
- M.Phil ಅಥವಾ Ph.D ಪದವೀಧರರಿಗೆ ಹೆಚ್ಚುವರಿ ಅಂಕಗಳನ್ನು ನೀಡಲಾಗುತ್ತದೆ.
ವಯಸ್ಸಿನ ಮಿತಿ
- ಅಭ್ಯರ್ಥಿಯ ವಯಸ್ಸು 32 ವರ್ಷಕ್ಕಿಂತ ಕಡಿಮೆ ಇರಬೇಕು.
ಸಂಬಳ
- ಫೆಲೋಗಳಿಗೆ ತಿಂಗಳಿಗೆ ರೂ.60,000/- ವಿದ್ಯಾರ್ಥಿ ವೇತನ ನೀಡಲಾಗುತ್ತದೆ.
- ಪ್ರತಿ ತಿಂಗಳು ರೂ.1500/- ಪ್ರಯಾಣ ಭತ್ಯೆ ನೀಡಲಾಗುವುದು.
ಅರ್ಜಿ ಶುಲ್ಕ
- ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ
Best Budget-Friendly Portable Laptop Stand In Amazon: View Here
ಆಯ್ಕೆ ಪ್ರಕ್ರಿಯೆ
- 07 ಫೆಲೋಗಳನ್ನು ಮೆರಿಟ್ ಕಮ್ ಅಪ್ಟಿಟ್ಯೂಡ್ ಮೌಲ್ಯಮಾಪನ, ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.
- ಎಲ್ಲಾ ಫಲೋಗಳನ್ನು ಕಲ್ಯಾಣ ಕರ್ನಾಟಕ ಪ್ರದೇಶದ ವಿವಿಧ ತಾಲ್ಲೂಕುಗಳಿಗೆ ನಿಯುಕ್ತಿ ಮಾಡಲಾಗುತ್ತದೆ.
ಫೆಲೋಶಿಪ್ ಅವಧಿ: ಈ ಫೆಲೋಶಿಪ್ 2 ವರ್ಷಗಳ ಕಾಲ ಇರುತ್ತದೆ. ಈ ಅವಧಿಯಲ್ಲಿ ಫಲೋಗಳು ವಿವಿಧ ಗ್ರಾಮಗಳಲ್ಲಿ ಕೆಲಸ ಮಾಡಬೇಕಾಗುತ್ತದೆ.
ಅಗತ್ಯ ಕೌಶಲ್ಯಗಳು
- ಕನ್ನಡ ಭಾಷೆಯಲ್ಲಿ ಸುಲಭವಾಗಿ ಮಾತನಾಡಲು, ಓದಲು ಮತ್ತು ಬರೆಯಲು ತಿಳಿದಿರಬೇಕು.
- ಫೆಲೋಗಳು ನಿಯೋಜನೆಗೊಳ್ಳುವ ತಾಲ್ಲೂಕಿನಲ್ಲಿ ವಾಸ ಮಾಡಬೇಕು ಮತ್ತು ಸ್ಥಳೀಯವಾಗಿ ಪ್ರವಾಸ ಕೈಗೊಳ್ಳಬೇಕು.
ಹೆಚ್ಚಿನ ಉದ್ಯೋಗಗಳು: ಹಾಸನ ಆಯುಷ್ ಇಲಾಖೆಯ ನೇಮಕಾತಿ: ತಜ್ಞ ವೈದ್ಯರು, ಔಷಧಿ ವಿತರಕರು, ಮಸಾಜಿಸ್ಟ್ ಒಟ್ಟು 14 ಹುದ್ದೆಗಳು ಲಭ್ಯವಿದೆ
ಪ್ರಮುಖ ದಿನಾಂಕಗಳು
ಈವೆಂಟ್ | ದಿನಾಂಕ |
---|---|
ಅಪ್ಲಿಕೇಶನ್‌ಗಳ ಪ್ರಾರಂಭ ದಿನಾಂಕ | 02/09/2024 |
ಅರ್ಜಿ ಸಲ್ಲಿಸಲು ಅಂತಿಮ ದಿನಾಂಕ | 09/09/2024 |
ಪ್ರಮುಖ ಲಿಂಕ್‌ಗಳು
ಅಧಿಕೃತ ವೆಬ್‌ಸೈಟ್ | ಇಲ್ಲಿ ಕ್ಲಿಕ್ ಮಾಡಿ |
ಅಧಿಕೃತ ಅಧಿಸೂಚನೆ ಲಿಂಕ್ | ಇಲ್ಲಿ ಡೌನ್‌ಲೋಡ್ ಮಾಡಿ |
ಆನ್‌ಲೈನ್ ಲಿಂಕ್ | ಇಲ್ಲಿ ಕ್ಲಿಕ್ ಮಾಡಿ |
ಅಧಿಸೂಚನೆ ಪುಟದ ಲಿಂಕ್ | ಇಲ್ಲಿ ವೀಕ್ಷಿಸಿ |
ವಾಟ್ಸಾಪ್ ಗ್ರೂಪ್ ಸೇರುವ ಲಿಂಕ್ | ಇಲ್ಲಿ ಕ್ಲಿಕ್ ಮಾಡಿ |
ಅರ್ಜಿ ಸಲ್ಲಿಸುವ ಪ್ರಕ್ರಿಯೆ
ಅರ್ಜಿ ಸಲ್ಲಿಸುವ ವಿಧಾನ: ಆಸಕ್ತರು 02-09-2024 ರಿಂದ 09-09-2024 ರವರೆಗೆ ಆನ್‌ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದು. ಅರ್ಜಿ ಸಲ್ಲಿಸುವ ಲಿಂಕ್ ಮೇಲೆ ನೀಡಲಾಗಿದೆ. ಅರ್ಜಿಗಳನ್ನು ಕೂರಿಯರ್ ಅಥವಾ ಅಂಚೆ ಮೂಲಕ ಸಲ್ಲಿಸಲು ಅವಕಾಶವಿಲ್ಲ. ಹೆಚ್ಚಿನ ಮಾಹಿತಿಗೆ https://prcrdpr.karnataka.gov.in/ ಗೆ ಭೇಟಿ ನೀಡಿ.
ಸಂಪರ್ಕ ವಿವರ: ಹೆಚ್ಚಿನ ಮಾಹಿತಿಗಾಗಿ ಅಭಿವೃದ್ಧಿ ಸಹಾಯಕ ನಿರ್ದೇಶಕರಿಗೆ, ಮೊಬೈಲ್ ನಂ-9740790530 ಸಂಪರ್ಕಿಸಬಹುದು.
ಫೆಲೋಗಳ ಕಾರ್ಯಪಾತ್ರ ಮತ್ತು ಜವಾಬ್ದಾರಿಗಳು
- ಸರ್ಕಾರಿ ಯೋಜನೆಗಳ ಸೌಲಭ್ಯಗಳು ಜನರಿಗೆ ತಲುಪುತ್ತಿರುವುದನ್ನು ಖಾತ್ರಿಪಡಿಸಬೇಕು.
- ಗ್ರಾಮಸಭೆಗಳಲ್ಲಿ ಜನರ ಭಾಗವಹಿಸುವಿಕೆ ಮತ್ತು ಯೋಜನೆ ರೂಪಿಸುವಿಕೆ.
- ಗ್ರಾಮ ಪಂಚಾಯತಿ ಆಡಳಿತದ ಶ್ರೇಣೀಕರಣದಲ್ಲಿ ಕೊನೆಯ 10 ಗ್ರಾಮಗಳ ಅಭಿವೃದ್ಧಿ.
- ಬಡತನ ನಿರ್ಮೂಲನೆ ಮತ್ತು ಸಾಮಾಜಿಕ ಒಳಗೊಳ್ಳುವಿಕೆ ಯೋಜನೆಗಳ ಅನುಷ್ಠಾನ.
- Action Research ಯೋಜನೆಗಳನ್ನು ಕೈಗೊಳ್ಳುವುದು.
Best Boat Air dopes Under 1000 In Amazon
ಅಂತಿಮ ತೀರ್ಮಾನ: Conclusion
ರಾಜೀವ್ ಗಾಂಧಿ ಪಂಚಾಯತ್ ರಾಜ್ ಫೆಲೋಶಿಪ್‌ಗಾಗಿ ಅರ್ಜಿ ಸಲ್ಲಿಸಲು ಕೇವಲ 5 ದಿನ ಬಾಕಿಯಿದೆ. ಆದ್ದರಿಂದ, ಆಸಕ್ತ ಅಭ್ಯರ್ಥಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಕೂಡಲೇ ಅರ್ಜಿ ಸಲ್ಲಿಸಬೇಕು. ಈ ಫೆಲೋಶಿಪ್ ಮೂಲಕ ಗ್ರಾಮೀಣಾಭಿವೃದ್ಧಿ ಕ್ಷೇತ್ರದಲ್ಲಿ ಕೆಲಸ ಮಾಡುವುದು ಮತ್ತು ಕರ್ನಾಟಕದ ಗ್ರಾಮೀಣ ಪ್ರದೇಶದ ಅಭಿವೃದ್ಧಿಗೆ ಸಹಾಯ ಮಾಡುವ ಅವಕಾಶ ಸಿಗುತ್ತದೆ. ಹೆಚ್ಚಿನ ಮಾಹಿತಿಗಾಗಿ, ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ. ಸಮಯ ಮೀರಿ ಹೋಗುವ ಮುನ್ನ ನಿಮ್ಮ ಅರ್ಜಿಯನ್ನು ಸಲ್ಲಿಸಿ.